ಕೆಂಪು ಚಿಟವ ಇದು ಮುಖ್ಯವಾಗಿ ಭಾರತೀಯ ಉಪಖಂಡದಲ್ಲಿ ಕಂಡು ಬರುವ ಪಕ್ಷಿ. ಗಂಗಾ ಮತ್ತು ಸಿಂಧೂ ನದಿಯ ಬಯಲು ಪ್ರದೇಶ,ದಕ್ಶಿಣದ ಪ್ರಸ್ಥಭೂಮಿಯ ಕೆಲವೆಡೆ ಹೆಚ್ಚಾಗಿ ಕಂಡು ಬರುವ ನೆಲಪಕ್ಷಿ. == ಲಕ್ಷಣಗಳು == ಇದು ಗೌಜುಗಕ್ಕಿಂತ ಚಿಕ್ಕದಾದ ಬೂದು -ಕಂದು ಪಕ್ಷಿ. ನೆತ್ತಿ ಕಡು ಕಂದು.ಬಿಳಿ ಹುಬ್ಬು.ಕಣ್ಣಿನ ಕೆಳಗೆ ಇಳಿ ಬಿಟ್ಟ ಕಪ್ಪು ಪಟ್ಟಿ. ಕತ್ತಿನ ಹಿಂಭಾಗ,ಬೆನ್ನು,ರೆಕ್ಕೆ,ಬಾಲ ಕಡು ಬೂದು ಬಣ್ಣದ್ದಾಗಿರುತ್ತದೆ.ಗದ್ದ,ಕತ್ತಿನ ಮುಂಭಾಗ ಹಾಗೂ ಎದೆ ಕೆಂಪು ಮಿಶ್ರಿತ ಕಂದು. ಕೊಕ್ಕು ಮತ್ತು ಕಾಲುಗಳು ಬೂದು ಬಣ್ಣವಿರುತ್ತದೆ. == ವೈಜ್ಞಾನಿಕ ಹೆಸರು == ಇದು ಗ್ಲ್ಲಾರಿಯೋಲಿಡೇ ಕುಟುಂಬಕ್ಕೆ ಸೇರಿದ್ದು, ಕರ್ಸೋರಿಯಸ್ ಕೋರೊಮ್ಯಾಂಡಲಿಕಸ್ 'ಎಂದು ವೈಜ್ಞಾನಿಕ ಹೆಸರು. ಇದನ್ನು ಸಂಸ್ಕೃತದಲ್ಲಿ ಶ್ವೇತಚರಣ ಎಂದು ಕರೆಯುತ್ತಾರೆ. == ಆವಾಸ == ಇದು ಒಂದು ನೆಲ ಪಕ್ಷಿ. ಹೆಚ್ಚಾಗಿ ಬಂಜರು ಭೂಮಿಗಳಲ್ಲಿ, ಬಯಲು ಪ್ರದೇಶಗಳಲ್ಲಿ ಒಂಟಿಯಾಗಿ ಕಂಡು ಬರುತ್ತದೆ.ಹೆಚ್ಚಾಗಿ ಮೌನಿ. == ಸಂತಾನೋತ್ಪತ್ತಿ == ಹೆಚ್ಚಾಗಿ ಮಾರ್ಚ್ -ಆಗಸ್ಟ್ ತಿಂಗಳಿನಲ್ಲಿ. ಕಪ್ಪು ಚುಕ್ಕಿ ಗಳಿರುವ ೨-೩ ಮೊಟ್ಟೆ ಗಳನ್ನು ಇಡುತ್ತದೆ. ನೆಲವನ್ನು ಕೆದರಿ ಗೂಡು ಕಟ್ಟುತ್ತದೆ. ಕೀಟಗಳು ಆಹಾರ. == ಬಾಹ್ಯ ಸಂಪರ್ಕಗಳು == 2012-02-12 ವೇಬ್ಯಾಕ್ ಮೆಷಿನ್ ನಲ್ಲಿ. == ಆಧಾರ == ೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್